Sunday 10 September 2017

ಗೌರಿ ಲಂಕೇಶರ ಮರೆಯುವ ಮುನ್ನ....



ಧರ್ಮ ಏವ ಹತೋ ಹಂತಿ ಧರ್ಮೋ ರಕ್ಷತಿ ರಕ್ಷಿತಃ|
ತಸ್ಮಾದ್ಧರ್ಮೋ ಹನ್ತವ್ಯಃ ಮಾನೋ ಧರ್ಮೋ ಹತೋವಾಧೀತ್||
ಮನುಸ್ಮೃತಿ 8.15
ನಾಶಮಾಡಿದಾಗ ಧರ್ಮವು ನಾಶವಾಗುತ್ತದೆ; ಹಾಗೆಯೇ ರಕ್ಷಿಸಿಲ್ಪಟ್ಟಾಗ ಧರ್ಮವೇ ರಕ್ಷಿಸುತ್ತದೆ. ಹಾಗಾಗಿ ಧರ್ಮವನ್ನು ಹಾಳುಮಾಡಬಾರದು; ಹಾಗಾದಲ್ಲಿ ಹಾಳಾದ ಧರ್ಮವೇ ನಮ್ಮನ್ನು ನಾಶಮಾಡುತ್ತದೆ
ಗೌರಿ ಲಂಕೇಶರ ಜೀವನದಲ್ಲಿ ಇದು ಅಕ್ಷರಃಶ ನಿಜವಾಯಿತು ಎಂದೆನಿಸುತ್ತದೆ. (ನಕ್ಸಲರಿಂದಲೇ ಗೌರಿಯವರ ಅಂತ್ಯವಾಯಿತೆಂದು ಸಾಮಾಜಿಕ ಜಾಲತಾಣಗಳಿಂದ ತಿಳಿದೆ. ನಿಜವೇ? ಗೊತ್ತಿಲ್ಲ!! ಸಮಾಜದಲ್ಲಿ ಪ್ರತಿಯೊಬ್ಬರೂ ಗೂಬೆ ಕೂರಿಸುವುದರಲ್ಲಿ ನಿಪುಣರಾದವರೇ!!). ಗೌರಿಯವರು ನಿಜ ಧರ್ಮವನ್ನು ಸರಿಯೆನ್ನಲಿಲ್ಲ. ನಕ್ಸಲರ ವಿಚಾರಧಾರೆಯನ್ನು ಮೆಚ್ಚಿಕೊಂಡರು. ನಾನೂ ಒಪ್ಪುತ್ತೇನೆ. ಆದರೆ ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಅನುಸರಿಸುವ ಮಾರ್ಗಗಳಿಗೆ ಮಾತ್ರ ಒಪ್ಪಿಗೆಯಿಲ್ಲ!! ಸಂವಿಧಾನವೇ ಧರ್ಮವೆಂದರು. ಇಂದು ನೋಡಿದರೆ ಸಂವಿಧಾನವೇ ಅವರ ಹತ್ಯೆಗೆ ನ್ಯಾಯ ದೊರಕಿಸಲು ಹಿಂದೆ ಮುಂದೆ ನೋಡುತ್ತಿದೆ!! ಹಾಳಾದ ಧರ್ಮವನ್ನು ಸರಿಪಡಿಸದೆ, ಅದನ್ನು ರಕ್ಷಿಸಿದ್ದೇ ಗೌರಿಯವರ ನಾಶಕ್ಕೆ ಕಾರಣವಾಯಿತು ಎಂದೆನಿಸುತ್ತದೆ

ಇದನ್ನೇ ಅನ್ನುವುದು "ಅವಿದ್ಯಾ". ಯಾವುದು ಸರಿ, ಯಾವುದು ತಪ್ಪು ಎಂದು ತಿಳಿದುಕೊಳ್ಳಲಾಗದ ಸ್ಥಿತಿ. "ತಸ್ಯ ಹೇತುರ್ ಅವಿದ್ಯಾ" (ಪತಂಜಲಿ ಯೋಗ ಸೂತ್ರ, ಸಾಧನ ಪಾದ, ಸೂತ್ರ 24). ಪ್ರತಿಯೊಂದಕ್ಕೂ ಕಾರಣ ಅವಿದ್ಯೆ. ತುಂಬಾ ಸರಳವಾಗಿ ವಿಶ್ಲೇಷಿಸಿದರೆ ಮಂಗಳೂರಿನಲ್ಲಿ ಅವರೆಂದರು "ಹಿಂದೂ ಧರ್ಮ ಒಂದು ತಂದೆ, ತಾಯಿ ಇಲ್ಲದ ಧರ್ಮ, ಸ್ತ್ರ್ರೀ ಯರಿಗೆ ಸರಿಯಾದ ಸ್ಥಾನಮಾನಗಳಿಲ್ಲ!!" ಆದರೆ ತಾನು ಹಿಂದೂ ಧರ್ಮದಲ್ಲಿ ಹುಟ್ಟದೆ; ಇಸ್ಲಾಂ, ಕ್ರೈಸ್ತ, ಯಹೂದಿ ಧರ್ಮದಲ್ಲಿ ಹುಟ್ಟಿದ್ದಿದ್ದರೆ 'ಇಂದು ರೀತಿ ಮಾತನಾಡಲು ಸಾಧ್ಯವಾಗುತ್ತಿತ್ತೆ??!!' ಎಂದು ಚಿಂತಿಸಿದ್ದರೂ ಸಾಕಿತ್ತು!! ಇದಲ್ಲವೇ ಅವಿದ್ಯೆ. ಆದರೆ ಅವರ ವಿವೇಕ (ಸರಿ,ತಪ್ಪು ಗಳನ್ನು ಅರಿಯುವ ಚಿಂತನಾ ಶಕ್ತಿ) ಕ್ಕೆ ಮೋಹವು ಕವಿದಿತ್ತು. ಹೇಗೆ

 ಧೂಮೇನಾವ್ರಿಯತೇ ವಹ್ನಿರ್ಯಥಾದರ್ಶೋ ಮಲೇನ |
ಯಥೋಲ್ಬೇನಾವೃತೋ ಗರ್ಭಸ್ತಥಾ ತೇನೇದಮಾವೃತಮ್||
(ಭಗವದ್ಗೀತೆ, ಅಧ್ಯಾಯ 3, ಶ್ಲೋಕ 38)
ಹೊಗೆಯು ಅಗ್ನಿಯನ್ನು ಮುಚ್ಚುವಂತೆ, ಧೂಳು ಕನ್ನಡಿಯನ್ನು ಮುಚ್ಚುವಂತೆ, ಗರ್ಭಕೋಶವು ಭ್ರೂಣವನ್ನು ಮುಚ್ಚುವಂತೆ, ವಿವಿಧ ಪ್ರಮಾಣಗಳ ಕಾಮ/ ಮೋಹಗಳು ಜೀವಿಯನ್ನು ಮುಚ್ಚುತ್ತವೆ. ಗೌರಿಯವರ ಅಭಿವ್ಯಕ್ತಿಗಳನ್ನೆಲ್ಲಾ ನಿಜವೆಂದರು. ಕೆಲವರು ಸಂಪೂರ್ಣ ಸುಳ್ಳೆಂದರು. ಇದು ಅವರನ್ನು ಕೆರಳಿಸಿತು. (ನಾವೇ ಅನ್ನ ಹಾಕಿದ ಸಾಕುಪ್ರಾಣಿಗಳೇ ಆದರೂ, ಕೆರಳಿದ್ದಾಗ ಜೋರು ಮಾಡಿ ಸುಮ್ಮನಿರಿಸಲು ಪ್ರಯತ್ನಿಸಿದಾಗ ಅವುಗಳು ಇನ್ನಷ್ಟು ಕೆರಳುವಂತೆ!! ಮನುಷ್ಯನೂ ಇವುಗಳಿಗೆ ಹೊರತಲ್ಲ). ಇನ್ನು ಕೆಲವರು ಅವರ ವಿಚಾರಧಾರೆಗಳಿಗೆ ಚಪ್ಪಾಳೆ ತಟ್ಟಿ ಮೋಹವನ್ನು ಇನ್ನಷ್ಟು ಗಟ್ಟಿಗೊಳಿಸಿದರು. ಕೊನೆಗೆ ಕೊಂದೇ ಬಿಟ್ಟರು!! ಆದರೆ ನಾನು ಗಮನಿಸಿದಂತೆ ಕೇವಲ ಮನೆ, ಸಂಸಾರಗಳಿಗೆ ಸೀಮಿತವಾಗಿದ್ದ ಹೆಣ್ಣು; ಅವುಗಳೆಲ್ಲವನ್ನು ಬಿಟ್ಟು ಯಶಸ್ವೀ ಸಮಾಜಮುಖಿಯಾಗಿ ಬೆಳೆದ ಅಭೂತಪೂರ್ವ ಹೆಣ್ಣು ಗೌರಿ! ನೋವು, ದುಃಖಗಳನ್ನು ಹೊರಚೆಲ್ಲಿ ಬದುಕಲು ಕಲಿಸಿದ ಸ್ತ್ರೀ ಶಕ್ತಿ!! ನಮ್ಮ ಅನಾಟಮಿ ಲ್ಯಾಬ್ ಹೊರಗೆ ಒಂದು ಮಾತಿರುತ್ತದೆ. This is the place where death delights to help life.  "ಸಾವು ಬದುಕಿರುವವರ ಬಾಳಿಗೆ ಮುನ್ನುಡಿ". ಆದರೆ ಇಲ್ಲಿ ಇವರ ಸಾವು ಅದೆಷ್ಟೋ "ಅವಿದ್ಯೆ ಜೀವಿ" ಗಳಿಗೆ "ವಿವೇಕ" ತುಂಬಿದೆಯೋ ಗೊತ್ತಿಲ್ಲ!!(ಇಲ್ಲವಾದರೆ ಲೇಖನವನ್ನು ಇನ್ನೊಮ್ಮೆ ಗಮನವಿಟ್ಟು ಓದಿ!)  ಆದರೆ ನಮ್ಮಲ್ಲಿದ್ದ ಓರ್ವ ಅಮೋಘ ಲೇಖಕಿಯನ್ನು ಕಳೆದುಕೊಂಡೆವು. ಕೊನೆಯದಾಗಿ... ಗೌರಿಯವರು ಒಪ್ಪದ ಸನಾತನ ಹಿಂದೂ ಧರ್ಮದ ಮನುಸ್ಮೃತಿ, ಭಗವದ್ಗೀತೆಗಳಲ್ಲಿ ಅವರ ನಾಶಕ್ಕೆ ನನಗೆ ಉತ್ತರ ದೊರಕಿದ್ದು ಮಾತ್ರ ವಿಪರ್ಯಾಸವೇ ಸರಿ!!!
(ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದು)

  • ಡಾಪುನೀತ್ ರಾಘವೇಂದ್ರ ಕುಂಟುಕಾಡು BNYS, MD Yoga Clinical 

No comments:

Post a Comment

Why do we commit mistakes even with full awareness??

“Doctor, I know that going to bed early in the night and waking up early in the morning is very good for health. In spite of that ...