Sunday, 6 August 2017

ಮಧುಮೇಹಕ್ಕೆ ಕಾರಣ "ಮಧುಮೋಹ"ವಲ್ಲ; ಮನದೊಳಗಿನ “ವ್ಯಾಮೋಹ”!!!


                    
ಭಾರತ ಮಧುಮೇಹ (ಡಯಾಬಿಟಿಸ್) ರಾಜಧಾನಿ.'ಸಾವಿಲ್ಲದಾ ಮನೆಯ ಸಾಸಿವೆ ಇಲ್ಲ‘ ಎಂಬಂತೆ 
ಮಧುಮೇಹಿಗಳಿಲ್ಲದ ಮನೆಗಳು ಅಪರೂಪವಾಗುತ್ತಿವೆಮಧುಮೇಹ ಕೇವಲ ಪಿತ್ರಾರ್ಜಿತವಾಗಿ (ಹೆರೆಡಿಟರಿವಂಶವಾಹಿಯಾಗಿ  ಕಾಣಿಸಿಕೊಳ್ಳುವುದಿಲ್ಲ,"ಸ್ವಯಾರ್ಜಿತ ಕರ್ಮ"ಗಳೂ ಕಾರಣವಾಗುತ್ತವೆಸ್ವಯಾರ್ಜಿತಗಳೆಂದರೆ ಕ್ರಮಬದ್ಧವಲ್ಲದ ಆಹಾರದೈಹಿಕ ಚಟುವಟಿಕೆಮಾನಸಿಕ ವಿಶ್ರಾಂತಿ ರಹಿತ ದಿನಚರಿಅನಿಯಮಿತ  ನಿದ್ರೆಯ ಸಮಯ ಇವಿಷ್ಟೂ ಅಲ್ಲದೆ ಅತಿಯಾದ ಮಾನಸಿಕ ಒತ್ತಡಅದನ್ನೇ ನಾವು ಕರೆಯುವುದು "ಸ್ಟ್ರೆಸ್". 
ಸ್ಟ್ರೆಸ್ ನಮ್ಮಆರೋಗ್ಯವನ್ನು ಹಾಳುಮಾಡಲುಕಾಯಿಲೆಗಳು ಕಾಣಿಸಿಕೊಳ್ಳಲು ಮೂಲವಾಗುತ್ತದೆಸರಳವಾದ ಉದಾಹರಣೆನಾವು ಮನೆಯಲ್ಲಿ ಮಾಮೂಲಿಯಂತೆ ಅಡುಗೆ ಮಾಡಿದಾಗ ಎಲ್ಲರೂ ಚಪ್ಪರಿಸಿ ತಿಂದು ಸೂಪರ್ ಎನ್ನುತ್ತಾರೆಬದಲಾಗಿ ನೆಂಟರು ಬಂದಾಗ ಮಾಡುವ ಅದೇ ಪಾಕ ಅಷ್ಟೊಂದು ಚೆನ್ನಾಗಿ ಬಂದಿರುವುದಿಲ್ಲ!! 
ಅಡುಗೆ ಎಲ್ಲಿ ಚೆನ್ನಗಾಗುವುದಿಲ್ಲವೋ ಎಂಬ ಆತಂಕಅದೇ ರೀತಿ ಮಾಡಿದ ಪಾಕ ಕೂಡ ಕೈಕೊಡುತ್ತದೆ!!  
ಹಾಳಾದರೆ ಮರ್ಯಾದೆ ಹೋಗುವುದೆಂಬ ಭಯ."ನಾನು ಮಾಡಿದೆಎಂಬುದಕ್ಕೆ ತಡೆ ಬಿದ್ದಂತೆಸ್ಟ್ರೆಸ್ಮಾನಸಿಕ ಒತ್ತಡಕ್ಕೆ ಮೂಲ ಕಾರಣ ನಮ್ಮಲ್ಲಿರುವ  ನಾನುನನ್ನದುನನ್ನಿಂದಎಂಬ "ಮೋಹ". ಸುಖವನ್ನಷ್ಟೇ ಅನುಭವಿಸಬೇಕೆಂಬ "ವ್ಯಾಮೋಹ".  ಅದನ್ನೇ ನಾವು "ರಾಜಸಿಕ ಕರ್ಮಎನ್ನುತ್ತೇವೆ.

ರಾಜಸಿಕ ಕರ್ಮ ಎಂದರೇನು?

ಯತ್ತು ಕಾಮೇಪ್ಸುನಾ ಕರ್ಮ ಸಾಹನ್ಕಾರೇಣ ವಾ ಪುನಃ!
ಕ್ರಿಯತೇ ಬಹುಲಾಯಾಸಂ ತದ್ ರಾಜಸಮುದಾಹೃತಮ್!!(ಭಗವದ್ಗೀತಾಅಧ್ಯಾಯ 18, ಶ್ಲೋಕ 24)
ಯಾವಾಗ ಕರ್ಮಗಳು ಫಲಾಪೇಕ್ಷೆಯಿಂದ ಕೂಡಿರುತ್ತದೆಯೋಜೊತೆಗೆ ಅಹಂಕಾರದಿಂದ ಅಥವಾ ಮತ್ತೆ ಮತ್ತೆ ಮಾಡಲ್ಪಡುತ್ತದೆಯೋಅತಿಯಾದ ಶ್ರಮಆಯಾಸವನ್ನುಂಟು ಮಾಡುವುದೋ ಅದನ್ನೇ ರಾಜಸಿಕ ಕರ್ಮ ಎನ್ನುತ್ತಾರೆಸಾಕಷ್ಟು ಹಣಸಂಪಾದಿಸಬೇಕುಆದಷ್ಟು ಐಷಾರಾಮದ ಜೀವನ ನಡೆಸಬೇಕೆಂಬ ಮೋಹಅದಕ್ಕಾಗಿ ನಾವು ತಿಂಗಳ ಸಂಬಳ ಮನಸ್ಸಲ್ಲಿಟ್ಟುಕೊಂಡೇ ಕೆಲಸ ಆರಂಭಿಸುತ್ತೇವೆನನ್ನಿಂದಾಗಿ  ಕೆಲಸಗಳು ಯಶಸ್ವಿಯಾಗುತ್ತಿವೆ ಎಂಬ ಅಹಂಕಾರ ಕೂಡಿಕೊಳ್ಳುತ್ತದೆಬಹಳಷ್ಟು ಆಯಾಸವಾಗುತ್ತಿರುತ್ತದೆ ಹಾಗಿದ್ದೂ ನಿದ್ದೆ 
ಕೆಟ್ಟು ದುಡಿಯುತ್ತೇವೆ. (ಸಾಫ್ಟ್ ವೇರ್ ಇಂಜಿನಿಯರ್ ಗಳಲ್ಲಿ  ಪದ್ಧತಿ ಸರ್ವೇ ಸಾಮಾನ್ಯಕೆಲವೊಮ್ಮೆ
ಅನಿವಾರ್ಯ!! ಆದರೆ ದುಡ್ಡುಗಳಿಸುವ ಆಸೆಯುಳ್ಳ ರಾಜಕಾರಣಿಗಳು ನಿದ್ದೆಗೆಟ್ಟು ಹಗಲೂ ರಾತ್ರಿ ಕಷ್ಟಪಡುತ್ತಿರುತ್ತಾರೆ!!). ಇದು ಕೇವಲ ಒಂದೆರಡು ದಿನವಲ್ಲ.. ಪ್ರತಿನಿತ್ಯಮತ್ತೆ ಮತ್ತೆ ಮಾಡುತ್ತಿರುತ್ತೇವೆಇದಲ್ಲವೇ ನಾವು ದಿನಂಪ್ರತಿ ಕಾಣುತ್ತಿರುವ "ರಾಜಸಿಕ ಕರ್ಮ"!!

ಮೋಹವು ಹೇಗೆ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ?

ಧ್ಯಾಯತೇ ವಿಷಯಾನ್ ಪುಂಸಃ ಸನ್ಗಸ್ತೇಷೂಪಜಾಯತೇ
ಸನ್ಗಾತ್ಸಞ್ಜಾಯತೇ ಕಾಮಃ ಕಾಮಾತ್ಕ್ರೋಧೋಭಿಜಾಯತೇ!!
ಕ್ರೋಧಾದ್ ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿವಿಭ್ರಮಃ
ಸ್ಮೃತಿ ಭ್ರಂಶಾದ್ ಬುದ್ಧಿನಾಶೋ ಬುದ್ಧಿನಾಶಾತ್ಪ್ರಣಶ್ಯತಿ!!(ಭಗವದ್ಗೀತೆಅಧ್ಯಾಯ 2, ಶ್ಲೋಕ 62,63)
ಇಂದ್ರಿಯ ವಸ್ತುಗಳನ್ನು ಕುರಿತು ಚಿಂತಿಸುವ ಮನುಷ್ಯನಿಗೆ ಅವುಗಳಲ್ಲಿ ಆಸಕ್ತಿ ಹುಟ್ಟುತ್ತದೆಇಂತಹ ಆಸಕ್ತಿಯಿಂದಕಾಮವು ಹುಟ್ಟುತ್ತದೆಕಾಮದಿಂದ ಕ್ರೋಧವು ಉದ್ಭವವಾಗುತ್ತದೆಕ್ರೋಧದಿಂದ ಸಮ್ಮೋಹವು ಉಂಟಾಗುತ್ತದೆ;ಸಮ್ಮೋಹದಿಂದ ಸ್ಮೃತಿ ಭ್ರಮೆಯಾಗುತ್ತದೆಸ್ಮೃತಿ ಭ್ರಮೆಯಿಂದ ಬುದ್ಧಿನಾಶವಾಗುತ್ತದೆಬುದ್ಧಿ ನಾಶವಾದಾಗ ಮನುಷ್ಯ ಹಾಳಾಗುತ್ತಾನೆ.
ಇದನ್ನು ನಮ್ಮ ದಿನಚರಿಗೆ ಹೋಲಿಸಿದಾಗ.. ಕಾರುಬಂಗಲೆ ಬೇಕೆನ್ನುವ "ಇಂದ್ರಿಯಗಳ ಆಸೆ". ಅದೇ ಮೋಹಸಾಕಷ್ಟು ದುಡ್ಡುಗಳಿಸಬೇಕುನನ್ನದು ಎನ್ನುವ ಅಧಿಕಾರ ಸಂಪಾದಿಸಬೇಕು ಎಂಬ ಮೋಹದಿಂದ ಆರಂಭಿಸುವ ಕಾರ್ಯಅದರ ಕುರಿತು ಚಿಂತಿಸಿ ಚಿಂತಿಸಿ ಅದರ "ಸಂಗಬೆಳೆಯುವುದು (ಅಂದರೆ ನನಗೇನಾದರು ಲಾಭವಿದ್ದರೆ ಮಾತ್ರ  ಕೆಲಸ ಮಾಡುವುದು ಎಂಬ ಮನಃಸ್ಥಿತಿ!!). ಇದರಿಂದ  ಕೆಲಸದ ಮೇಲೆ "ಕಾಮಅಂದರೆ ಆಸೆ ಬೆಳೆಯುವುದುಹಾಗೆಯೇ  ಕೆಲಸ ಎಲ್ಲಿ ಹಾಳಾಗಿಬಿಡುವುದೋ ಎಂಬ ಚಿಂತೆಅದೇ “ಕ್ರೋಧ”.(ಆಫೀಸ್ ನಲ್ಲಿ ಬಾಸ್ ಸಹೋದ್ಯೋಗಿಗಳ ಮೇಲೆ ಸಿಟ್ಟುಮಾಡಿಕೊಂಡಂತೆಕೆಲಸ ಹಾಳಾದಲ್ಲಿ ತನ್ನ ಹೆಸರು ಹಾಳಾಗುವುದು ಎಂಬ ಚಿಂತೆ!!). ಅದೇ ಕ್ರೋಧವು " ಸಮ್ಮೋಹಗೊಳಿಸುತ್ತದೆ. (ಅಂದರೆ ವಶದಲ್ಲಿರುವುದುಇತರೆ ಚಿಕ್ಕ ಪುಟ್ಟ ವಿಷಯಗಳಿಗೂ ರೇಗುವುದು). ಸಮ್ಮೋಹದಿಂದ "ಸ್ಮೃತಿ ವಿಭ್ರಮ"ವಾಗುವುದುಸ್ಮೃತಿ ಎಂದರೆ ನೆನಪುಅನುಭವಿಸಿದ ವಿಷಯಗಳನ್ನು ಕಳೆದುಕೊಳ್ಳದಿರುವಿದುಸೃತಿ ವಿಭ್ರಮವೆಂದರೆ ತಾನು ಹಿಂದೆ ಅನುಭವಿಸಿದ ತೊಂದರೆಯನ್ನು ನೆನಪಿಸಿಕೊಳ್ಳದಿರುವುದು. (ಬಾಸ್ ಆದವನಿಗೆ ಒಂದು ಕೆಲಸ ಸಹೋದ್ಯೋಗಿಗಳು ಇಂದೇ ಮಾಡಿಕೊಡಬೇಕು ಎಂಬ ಹಠಅದೇ ಕೆಲಸವನ್ನು ಬಾಸ್ ಸ್ವತಃ ಮಾಡಲು ಒಂದು ವಾರ ತೆಗೆದುಕೊಂಡಿದ್ದ!!!).ಸ್ಮೃತಿ ಭ್ರಂಶವಾದಾಗ (ಹಾಳಾದಾಗಬುದ್ಧಿನಾಶವಾಗುತ್ತದೆಬುದ್ಧಿ ಎಂದರೆ ಯಾವುದು ಸರಿ /ಯಾವುದುತಪ್ಪು ಎಂದು ತಿಳಿದುಕೊಳ್ಳುವುದುನಾಶವಾದಾಗಎಂದರೆ ತಪ್ಪೆಂದು ಗೊತ್ತಿದ್ದೂ  ಕೆಲಸದಲ್ಲಿ  ತೊಡಗಿಕೊಳ್ಳುವುದು. (ಮದ್ಯ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಗೊತ್ತಿದೆಆದರೆ ವೀಕ್ ಎಂಡ್ ಬಂದಾಗ ಬುದ್ಧಿನಾಶವಾಗಿರುತ್ತದೆ!! ಗೊತ್ತಿದ್ದೂ ಸಾರಾಯಿ ಕುಡಿಯುತ್ತಾರೆ!!). ನಿದ್ದೆ ಕೆಡುವುದು ಒಳ್ಳೆಯದಲ್ಲ  ಎಂದು ಗೊತ್ತಿದೆಹಾಗಿದ್ದೂ ನಿದ್ದೆ ಕೆಟ್ಟು ದುಡಿಯುತ್ತಾರೆ ( ಹೆಚ್ಚು ದುಡ್ಡು ಸಂಪಾದಿಸಬೇಕಲ್ಲ??). ಅದಲ್ಲವೇ  ಮಾನಸಿಕ ಒತ್ತಡ?? ಬೇಗ ಎದ್ದು ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಗೊತ್ತಿದೆಹಾಗಿದ್ದೂ ಮಾಡುವುದಿಲ್ಲ!! ಆಗ ಉದ್ಭವಗೊಳ್ಳುವುದೇ "ಪ್ರಣಶ್ಯತಿಅಂದರೆ ಹಾಳಾಗುವುದುಮನುಷ್ಯ ದೈಹಿಕವಾಗಿಮಾನಸಿಕವಾಗಿ ಹಾಳಾಗುತ್ತಾನೆಅದಲ್ಲವೇ ಅನಾರೋಗ್ಯವೆಂದರೆಸಾಕಲ್ಲವೇ ಮಧುಮೇಹ ಆರಂಭಗೊಳ್ಳಲು??!!

ಮಾನಸಿಕ ಒತ್ತಡ ಹೆಚ್ಚು ದೀರ್ಘವಾದಂತೆ ಶರೀರದ "ಸ್ಟ್ರೆಸ್ ಹಾರ್ಮೋನ್'ಗಳ ಕಾರ್ಯಕ್ಷಮತೆ ಕುಂಠಿತವಾಗುತ್ತದೆಇದರಿಂದ 'ಇನ್ಸುಲಿನ್ ಪ್ರತಿರೋಧಆರಂಭವಾದಂತೆ ಶರೀರದ ಸಕ್ಕರೆಯ ಅಂಶ ಹೆಚ್ಚಾಗತೊಡಗುತ್ತದೆಅದುವೇ "ಡಯಾಬಿಟಿಸ್". ಹಾಗಾಗಿ ಮಧುಮೇಹ ಬರಲು "ಮಧುಮೋಹಬೇಕೆಂದಿಲ್ಲಅಂದರೆ ಅತಿಯಾಗಿ 
ಸಿಹಿ ಸೇವನೆ ಮಾಡಬೇಕೆಂದಿಲ್ಲಕೇವಲ ಸುಖಪಡಬೇಕುಐಷಾರಾಮಿ ಜೀವನ ನಡೆಸಬೇಕುನಾನು/ನನ್ನದೆಂಬ ಅಧಿಕಾರ ಹೊಂದಿರಬೇಕೆಂಬ "ವ್ಯಾಮೋಹ"ವೊಂದಿದ್ದರೆ ಸಾಕು!!!


ಡಾಪುನೀತ್ ರಾಘವೇಂದ್ರ ಕುಂಟುಕಾಡು

5 comments:

  1. Great dear.neatly explained or linked effect or role of psychology that converts physiology into pathology. Handful of diabetics would catch n work on the root of disorder. Nice dear doctor. Many people need promotion of positive psychology to alter the chemistry of their pathology

    ReplyDelete
    Replies
    1. thank you sir... without knowing these factors management of Diabetes is always waste of our energy...

      Delete
  2. Very well, presented.. Dr Puneet.

    ReplyDelete

Why do we commit mistakes even with full awareness??

“Doctor, I know that going to bed early in the night and waking up early in the morning is very good for health. In spite of that ...